Yes Sir !
ಎಸ್ ಸರ್!
- ವಿನಯ ಬಲ್ಸೆ
ಮಾರ್ಚ್ ತಿಂಗಳ ಒಂದು ದಿನ, ನಾನು ಹಾಗೂ ನನ್ನ ಮಿತ್ರ ಗೌರಂಗಸಿಂಹ ವಾಗ್ಲೆ ಟ್ಯಾಕ್ಸಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದತ್ತ ಹೋಗುತ್ತಿದ್ದೆವು. ಆ ಎರಡು ಘಂಟೆಗಳ ಪ್ರಯಾಣದಲ್ಲಿ ಆತ ನನಗೆ ಬಾಪೂಜಿಯವರ ಬಗೆಗೆ ತಿಳಿಸಿ ಹೇಳುತ್ತಿದ್ದನು. ಈ ರೀತಿ ಅಂದಿನ ದಿನ ನಾನು ಬಾಪೂರವರ ಮಾಹಿತಿಯನ್ನು ಪಡೆದೆನು. ಆತನ ಮಾತುಗಳನ್ನು ಸರಿಯಾಗಿ ಕೇಳಿಕೊಂಡ ನಾನು ಅತೀವ ಉತ್ಸಾಹದಿಂದ ಅವನಿಗೆ ‘‘ ಇಂದು ನಿನ್ನ ಮಾತುಗಳನ್ನು ಕೇಳಿ ನನಗನಿಸುತ್ತಿದೆ, ಖಂಡಿತವಾಗಿಯೂ ನನ್ನ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳುಂಟಾಗುವುದು’’ ಎಂದು ಹೇಳಿದೆನು.ನಿಜವಾಗಿಯೂ ಹಿಂತಿರುಗಿ ನೋಡಿ ನನ್ನ ಹಿಂದಿನ ಎರಡು ವರ್ಷಗಳಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿದರೆ, ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆಯೆಂಬುದನ್ನು ನಂಬಲೇ ಬೇಕಾಗುತ್ತದೆ. ಅದು ಕೇವಲ ವ್ಯಾವಹಾರಿಕ ಬದಲಾವಣೆಗಳಷ್ಟೇ ಅಲ್ಲ, ನನ್ನ ಗುಣದಲ್ಲಿಯೂ ಬದಲಾವಣೆಯಾಗಿದೆ.
- ವಿನಯ ಬಲ್ಸೆ